ಅಡುಗೆಮನೆ ಜಗತ್ತು

ವಾರದ ಕವಿತೆ ಅಡುಗೆಮನೆ ಜಗತ್ತು ಉಮಾ ಮುಕುಂದ್ ಕಬ್ಬಿಣದ ತವದ ಮೇಲೆರೆದದೋಸೆಯ ರುಚಿ ಮತ್ತು ಗರಿನಾನ್ ಸ್ಟಿಕ್ ತವದ ದೋಸೆಗೆ ಬಂದೀತು ಹೇಗೆ?ಅಂಟಿಸಿಕೊಳ್ಳದ್ದು ಆಪ್ತವಾದೀತು ಹೇಗೆ? ಉಪ್ಪಿನಕಾಯಿ ಜಾಡಿಗೆ ತುಂಬಿಸಿಮುಚ್ವಿಟ್ಟರೆ ಮುಗಿಯಲಿಲ್ಲಆಗಾಗ್ಗೆ ಕೈಯಾಡಿಸಬೇಕು ತೆಗೆದುಕೆಡದಂತಿರಿಸಿಕೊಳ್ಳಲು. ಅಡುಗೆಮನೆ ಕೈಒರೆಸುಅನಿವಾರ್ಯವಾದರೂಮನೆಯವರಿಗೆ ಸಸಾರಕೆಲಕೆಲವು ಜನರ ಹಾಗೆ. ಬೇಕಾದ್ದು, ಬೇಡದ್ದು ತುಂಬಿಮುಚ್ಚಿಬಿಡುವ ಕಪಾಟಿನಡುಗೆಮನೆಗಿಂತಾಇಟ್ಟಿದ್ದು, ಕೆಟ್ಟದ್ದು ಕಾಣುವ ಅಡುಗೆಮನೆಯಾದರೆಆಗಾಗ ಶುಚಿಗೊಳಿಸಿಕೊಂಡೇವು. ತರಕಾರಿ ಸಹಜ ಬಣ್ಣ ಉಳಿಸಿಕೊಳ್ಳಲುಬೇಯುವಾಗಿಷ್ಟು ಉಪ್ಪು ಉದುರಿಸಿದರಾಯ್ತುಮನುಷ್ಯರ ನಿಜಬಣ್ಣ ತಿಳಿಯಲುಉಪಾಯವೇನಾದರೂ ಇದ್ದಿದ್ದರೆ… ಮೊಂಡಾದ ಚಾಕು, ಈಳಿಗೆಗೆಸಾಣೆ ಹಿಡಿಯಬೇಕು ಆಗಾಗ್ಗೆಮೊನಚು ಕಳಕೊಂಡ ಸಂಬಂಧಗಳಿಗೂ ಹಾಗೇ… … Continue reading ಅಡುಗೆಮನೆ ಜಗತ್ತು